ಜರ್ಮನಿ: ಏಳು ಬಾರಿ ಫಾರ್ಮುಲಾ ಒನ್ ವಿಶ್ವ ಚಾಂಪಿಯನ್ ಮೈಕೇಲ್ ಶೂಮಾಕರ್ ತಲೆಗೆ ಉಂಟಾದ ಮಾರಣಾಂತಿಕ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಅವರ ಮಾಜಿ ಬಾಸ್ ಲೂಕಾ ಡಿ ಮಾಂಟೆಜೆಮೊಲೊ ತಿಳಿಸಿದ್ದಾರೆ. ಪೂರ್ಣ ಕಾಲದ ವೈದ್ಯಕೀಯ ಸಿಬ್ಬಂದಿ 47 ವರ್ಷದ ಶೂಮಾಕರ್ ಅವರಿಗೆ ವಿಶೇಷ ಚಿಕಿತ್ಸೆಯನ್ನು ಅವರ ಬಂಗಲೆಯಲ್ಲಿ ನೀಡುತ್ತಿದ್ದಾರೆ. ಅವರು ತುಂಬಾ ದೃಢಕಾಯ ವ್ಯಕ್ತಿತ್ವ ಎನ್ನುವುದು ತಮಗೆ ಗೊತ್ತಿದೆ. ಇಂತಹ ಕಷ್ಟದ ಸ್ಥಿತಿಯಿಂದ ಅವರು ಹೊರಗೆ ಬರುತ್ತಾರೆಂದು ನಾನು ಆಶಿಸುವೆ ಎಂದು ಮಾಂಟೆಜೆಮೊಲೊ ಹೇಳಿದರು. […]
↧