ಲಂಡನ್ : ಈಗ ಸರಿ ಸುಮಾರು 73 ವರ್ಷಗಳ ಹಿಂದೆ, ಎರಡನೇ ಮಹಾಯುದ್ಧದ ವೇಳೆ ನಾಪತ್ತೆಯಾಗಿದ್ದ ಬ್ರಿಟನ್‌ನ ರಾಯಲ್ ನೇವಿಯ ಜಲಾಂತರ್ಗಾಮಿಯೊಂದು ಇದೀಗ ಇಟಲಿ ಕರಾವಳಿಯ ದೂರ ಸಮುದ್ರದಾಳದಲ್ಲಿ ಪತ್ತೆಯಾಗಿದೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಶತ್ರು ದೇಶಗಳಿಂದ ಸಮುದ್ರದಾಳದಲ್ಲಿ ಹುಗಿಯಲ್ಪಟ್ಟಿದ್ದ ನೆಲ ಬಾಂಬ್ ಸ್ಫೋಟಗೊಂಡು ನಾಶವಾಯಿತೆಂದು ಭಾವಿಸಲಾಗಿದ್ದ ಈ ಜಲಾಂತರ್ಗಾಮಿಯೊಳಗೆ ಆ ಸಂದರ್ಭದಲ್ಲಿ ಇದ್ದ 71 ಮಂದಿ ಚಾಲಕ ಸಿಬಂದಿಗಳ ಮೃತ ದೇಹಗಳು ಕೂಡ ಯಥಾಸ್ಥಿತಿಯಲ್ಲಿ ಪತ್ತೆಯಾಗಿರುವುದು ಅಚ್ಚರಿಯ ಸಂಗತಿಯಾಗಿದೆ. ಇಟಲಿಯ ಸಾರ್ಡಿನಿಯಾದ ಈಶಾನ್ಯ ಕರಾವಳಿಯಲ್ಲಿನ ಟ್ಯಾವೋಲಾರಾ […]
↧