ಸಿಂಗಪೂರ್, ಮೇ 28- ಸಿಂಗಪೂರ್‌ನ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಪರೀಕ್ಷಾ ಫಲಿತಾಂಶ ಇಂದು ಪ್ರಕಟವಾಗಿದ್ದು, ಭಾರತೀಯ ಮೂಲದ ವಿದ್ಯಾರ್ಥಿನಿಯರಾದ ಅನುಷ್ಕಾ ಗಾಯಕ್ವಾಡ ಮತ್ತು ಶುಭಂ ಸರಾಫ್ ಇಡೀ ದೇಶಕ್ಕೇ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದ್ದಾರೆ. ಈ ಇಬ್ಬರೂ ವಿದ್ಯಾರ್ಥಿನಿಯರೂ ಗ್ಲೋಬಲ್ ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ಶೇ.50ರಷ್ಟು ಜಪಾನೀಯರಾಗಿದ್ದು, ಉಳಿದವರು ಬೇರೆ ಬೇರೆಯವರಿದ್ದಾರೆ.
↧