ವಾಷಿಂಗ್ಟನ್: ಮ್ಯೂಸಿಯಂಗೆ ಹೋದ್ರೆ ಅಲ್ಲೊಂದು ಇಲ್ಲೊಂದು ಹಳೆಯ ಪಳೆಯುಳಿಕೆಗಳು, ಪ್ರಾಣಿಗಳ ಕೊಂಬುಗಳು ನೋಡಲು ಸಿಗುತ್ತೆ. ಆದ್ರೆ ಈ ಮನೆಗೆ ಬಂದ್ರೆ ಮಾತ್ರ ನಿಮಗೆ ಬರೋಬ್ಬರಿ 15 ಸಾವಿರ ಕೊಂಬುಗಳು ಕಾಣಸಿಗುತ್ತೆ. ಹೌದು. ಅಮೆರಿಕದ ಮಾಂಟಾನದಲ್ಲಿರುವ ಥ್ರಿ ಫೋಕ್ಸ್ ನಗರದಲ್ಲಿ ಒಂದು ಮ್ಯೂಸಿಯಂ ಮನೆಯಿದೆ ಇದರೊಳಗೆ ಹೋದ್ರೆ 15 ಸಾವಿರಕ್ಕೂ ಹೆಚ್ಚು ಪ್ರಾಣಿಗಳ ಕೊಂಬುಗಳು ನೋಡಲು ಸಿಗುತ್ತವೆ. ಒಂದೇ ಮನೆಯಲ್ಲಿ ಇಷ್ಟೊಂದು ಕೊಂಬುಗಳನ್ನು ಸಂಗ್ರಹಿಸಲು ಫಿಲಿಪ್ಸ್ ಎಂಬುವವರು ಬರೋಬ್ಬರಿ 60 ವರ್ಷ ತೆಗೆದುಕೊಂಡಿದ್ದಾರೆ. 30*64 ಅಡಿ ವಿಸ್ತೀರ್ಣವಿರುವ ಮನೆಯಲ್ಲಿ […]
↧