ಯೆಮೆನ್, ಏ.5-ಉಗ್ರರ ಪ್ರಬಲ ಕ್ಷಿಪಣಿ ಮತ್ತು ಷೆಲ್ಲಿಂಗ್ ದಾಳಿಯಿಂದಾಗಿ, ಅಪಾಯದಲ್ಲಿರುವ ಭಾರತೀಯರನ್ನು ಕರೆತರಲು ಹೋಗಿರುವ ಭಾರತೀಯ ನೌಕಾಪಡೆಯ ಐಎನ್‌ಎಸ್ ಮುಂಬೈ ಯುದ್ಧನೌಕೆ ಅಡೇನ್ ಬಂದರಿನೊಳಕ್ಕೆ ಪ್ರವೇಶಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ಬಂದರಿಂದ ಕೆಲವು ಕಿಲೋ ಮೀಟರ್‌ಗಳ ದೂರದಲ್ಲಿ ಲಂಗರು ಹಾಕಿರುವ ಐಎನ್‌ಎಸ್ ಮುಂಬೈ ಹಡಗಿಗೆ ಯೆಮೆನ್‌ನಿಂದ ಪಾರಾದ ಭಾರತೀಯರನ್ನು ಬೋಟ್‌ಗಳ ಮೂಲಕ ಹಡಗಿಗೆ ತಲುಪಿಸಲಾಗುತ್ತಿದೆ. ಪ್ರಸ್ತುತ ಸುಮಾರು 200ಕ್ಕೂ ಹೆಚ್ಚು ಭಾರತೀಯರು ಸದ್ಯ ಅಡೇನ್ ಬಂದರಿನ ಬಳಿ ಕಾಯುತ್ತಿದ್ದಾರೆ ಎಂದು ಕೇರಳದ ಸಚಿವ ಕೆ.ಸಿ.ಜೋಸೆಫ್ ತಿಳಿಸಿದ್ದಾರೆ. ಐಎನ್‌ಎಸ್ ಮುಂಬೈ […]
↧