ಸಲಿಂಗರತಿ ಅಪರಾಧವೇ ಎನ್ನುವುದು ಬಹಳ ವರ್ಷಗಳಿಂದಲೂ ಚರ್ಚಾಸ್ಪದ ವಿಷಯವಾಗಿದೆ. ವಿಶ್ವಸಂಸ್ಥೆಯ ಸಿಬ್ಬಂದಿ ಯಲ್ಲಿ ಇರುವ ಸಲಿಂಗಿ ಸಂಗಾತಿಗಳಿಗೆ ನೀಡುತ್ತಿರುವ ವಿವಿಧ ಸೌಲಭ್ಯಗಳನ್ನು ಕಡಿತ ಮಾಡಬೇಕು ಎಂದು ರಷ್ಯಾ ಕಳೆದ ವಾರ ಮಂಡಿಸಿದ್ದ ಗೊತ್ತುವಳಿಯನ್ನು ಭಾರತ ಬೆಂಬಲಿಸಿದ್ದರೂ, 80–43 ಮತಗಳ ಅಂತರದಿಂದ ತಿರಸ್ಕೃತಗೊಂಡಿದೆ. ಈ ವಿಷಯದಲ್ಲಿ ಅಂತರರಾಷ್ಟ್ರೀಯ ರಾಜಕಾರಣವೂ ತಳಕು ಹಾಕಿಕೊಂಡಿದೆ. ರಷ್ಯಾವನ್ನು ಏಕಾಂಗಿಯನ್ನಾಗಿ ಮಾಡುವ ಉದ್ದೇಶವೂ ಅಮೆರಿಕೆಗೆ ಇರುವುದು ಇಲ್ಲಿ ಸ್ಪಷ್ಟ ಗೊಳ್ಳುತ್ತದೆ. ಸಲಿಂಗಕಾಮಿ ಸ್ತ್ರೀ – ಪುರುಷರು, ದ್ವಿಲಿಂಗಿಗಳು (ಸ್ತ್ರೀ ಮತ್ತು ಪುರುಷ ಇಬ್ಬರಿಂದಲೂ […]
↧