ಪಾಪ್‌ಕಾರ್ನ್ ಕುರಿತಂತೆ ಈಗಿನ ಜನರೇಷನ್‌ಗೆ ವಿವರಣೆ ನೀಡುವ ಅಗತ್ಯವಿಲ್ಲ. ಅಷ್ಟರ ಮಟ್ಟಿಗೆ ಮೆಕ್ಕೆಜೋಳದ ಪಾಪ್‌ಕಾರ್ನ್ ಜನಪ್ರಿಯವಾಗಿದೆ. ಕೇವಲ ಟೈಂಪಾಸ್‌ಗೆ ಪಾಪ್‌ಕಾರ್ನ್ ತಿನ್ನೋಣ ಎಂದು ಹೇಳುವವರ ಸಂಖ್ಯೆಯೇ ಹೆಚ್ಚು. ಆದರೆ, ಅದರಿಂದ ನಮ್ಮ ದೇಹದ ಆರೋಗ್ಯ ಸುಧಾರಣೆಯಾಗಬಲ್ಲದು ಎಂಬ ವಿಚಾರ ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ. ನಗರೀಕರಣ ವಿಸ್ತಾರವಾದಂತೆಲ್ಲಾ ಪಾಪ್‌ಕಾರ್ನ್ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿದೆ. ಜಾತ್ರೆ, ಪ್ರವಾಸ, ಪ್ರಯಾಣ ಕಾಲದಲ್ಲಿ ಇದಕ್ಕೆ ಎಲ್ಲಿಲ್ಲದ ಬೇಡಿಕೆ ಉಂಟಾಗುತ್ತದೆ. ಬೆಂಗಳೂರಿನಲ್ಲಂತೂ ರಸ್ತೆ ಬದಿ, ಚಿತ್ರಮಂದಿರ, ಮಾಲ್ ಸೇರಿದಂತೆ ಎಲ್ಲೆಂದರಲ್ಲಿ ಪಾಪ್‌ಕಾರ್ನ್ ಮಾರಾಟ ನಡೆಯುತ್ತಿದೆ. […]
↧