ಬೀಜಿಂಗ್: ಅಪಾರ್ಟ್‍ಮೆಂಟ್‍ನ ಕಿಟಕಿಯ ಕಂಬಿಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಬಾಲಕನನ್ನು ಸ್ಥಳೀಯರೇ ರಕ್ಷಣೆ ಮಾಡಿರುವಂತಹ ಘಟನೆ ಚೀನಾದಲ್ಲಿ ನಡೆದಿದೆ. ಚೀನಾದ ಸಿಚುಯಾನ್ ಪ್ರಾಂತ್ಯದ ಡಾಝು ಎಂಬಲ್ಲಿ ಇಂತಹದೊಂದು ಘಟನೆ ನಡೆದಿದ್ದು, 2 ವರ್ಷದ ಬಾಲಕನ ತಲೆ ಬಾಲ್ಕನಿಯ ಕಿಟಕಿಯ ಕಂಬಿಗಳಲ್ಲಿ ಸಿಕ್ಕಿಹಾಕಿಕೊಂಡು ನೇತಾಡುತ್ತಿದ್ದ ದೃಶ್ಯವನ್ನ ನೋಡಿದ ಅದೇ ಅಪಾರ್ಟ್‍ಮೆಂಟ್‍ನ ನಿವಾಸಿಗಳು ಸಮಯಪ್ರಜ್ಷೆ ಮೆರೆದು ಬಚಾವ್ ಮಾಡಿದ್ದಾರೆ. ಒಂದು ವೇಳೆ ಬಾಲಕನೇನಾದರೂ ಕಿಟಕಿಯ ಕಂಬಿಗಳಿಂದ ಬಿಡಿಸಿಕೊಂಡಿದ್ರೆ, ಆತ ಮಹಡಿಯಿಂದ ಕೆಳಗೆ ಬಿದ್ದು ಸಾಯುವ ಸಾಧ್ಯತೆಗಳು ಹೆಚ್ಚಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
↧