ಡೆನ್ವರ್: ಹೆತ್ತ ಮಕ್ಕಳ ರಕ್ಷಣೆಗೆ ತಾಯಿ ಏನನ್ನೂ ಬೇಕಾದರೂ ಮಾಡಲು ಸಿದ್ಧಳಿರುತ್ತಾಳೆಂಬುದಕ್ಕೆ ಈ ಘಟನೆ ಉದಾಹರಣೆಯೆನ್ನಬಹುದು. ಪರ್ವತ ಸಿಂಹದ ಬಾಯಲ್ಲಿ ಸಿಲುಕಿ ನರಳಾಡುತ್ತಿದ್ದ ತನ್ನ 5 ವರ್ಷದ ಮಗುವನ್ನು ರಕ್ಷಿಸಲು ತಾಯಿಯೊಬ್ಬಳು ಸಿಂಹದೊಂದಿಗೆ ಕಾದಾಡಿ ಕೊನೆಗೂ ಮಗುವನ್ನು ರಕ್ಷಿಸಿರುವ ಘಟನೆಯೊಂದು ಪಶ್ಚಿಮ ಅಮೆರಿಕದ ಕೊಲೊರಾಡೊ ರಾಜ್ಯದಲ್ಲಿ ನಡೆದಿದೆ. ರೆಸಾರ್ಟ್ ನ ಹೊರಭಾಗದಲ್ಲಿ ತನ್ನ ಸಹೋದರನೊಂದಿಗೆ ಆಟವಾಡುತ್ತಿದ್ದ ಮಗುವಿನ ಬಳಿ ಪರ್ವತ ಸಿಂಹವೊಂದು ಬಂದಿದೆ. ಸಿಂಹವನ್ನು ನೋಡುತ್ತಿದ್ದಂತೆ ಸಹೋದರ ತಮ್ಮನನ್ನು ಬಿಟ್ಟು ಓಡಿಹೋಗಿದ್ದಾನೆ. ಕೂಡಲೇ ಸಿಂಹ ಮಗುವಿನ ತಲೆಗೆ […]
↧