ಪಿಟ್ಸ್’ಬರ್ಗ್: ಯಾರಿಗಾದರೂ ಅಪರಿಚಿತರಿಗೆ ಕಿಸ್ ಕೊಡುವ ಮುನ್ನ ಹುಷಾರ್..! ಮುತ್ತು ಕೊಟ್ಟಾಗ ಎಂಜಲಿನ ಮೂಲಕ ಅಪಾಯಕಾರಿ ವೈರಸ್’ವೊಂದು ಹಬ್ಬುತ್ತಿರುವ ಅಂಶ ಬೆಳಕಿಗೆ ಬಂದಿದೆ. ಈ ವೈರಸ್ ನಮ್ಮ ಲೈಂಗಿಕ ಶಕ್ತಿಯನ್ನೇ ಕುಂದಿಸಬಲ್ಲುದಂತೆ. ಸಂತಾನಹೀನ ಮಹಿಳೆಯರ ಅಧ್ಯಯನ ಮಾಡಿದಾಗ ಈ ವಿಚಾರ ಬಹಿರಂಗಗೊಂಡಿದೆ ಎಂದು ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ. ಮಕ್ಕಳಾಗಲು ಸಾಧ್ಯವಿಲ್ಲದ ಶೇ. 43ರಷ್ಟು ಮಹಿಳೆಯರ ಗರ್ಭಕೋಶದಲ್ಲಿ ಹೆಚ್’ಹೆಚ್’ವಿ-6ಎ ಎಂಬ ಹರ್ಪೆಸ್ ಜಾತಿಯ ವೈರಸ್ ಇರುವುದು ಕಂಡುಬಂದಿದೆ. ಸಂತಾನೋತ್ಪತ್ತಿ ಶಕ್ತಿ ಸಹಜವಾಗಿರುವ ಮಹಿಳೆಯರಲ್ಲಿ ಈ ವೈರಸ್ ಕಾಣಿಸಿಕೊಂಡಿಲ್ಲ. […]
↧