ಇಸ್ಲಾಮಾಬಾದ್: ಬಿಗ್ ಬಾಸ್ ಖ್ಯಾತಿಯ ಪಾಕಿಸ್ತಾನ ಮಾಡೆಲ್ ಕಂದೀಲ್ ಬಲೋಚ್ ರನ್ನು ಆಕೆಯ ಸಹೋದರ ಹತ್ಯೆಗೀಡು ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹರಿದುಬರುತ್ತಿರುವ ಪ್ರತಿಕ್ರಿಯೆಗಳು ಇನ್ನೂ ನಿಂತಿಲ್ಲ. ಇದೊಂದು ಮರ್ಯಾದಾ ಹತ್ಯೆ ಎಂದು ಹೇಳಲಾಗುತ್ತಿದ್ದರೂ ಸಾರ್ವಜನಿಕರು ಸಿಟ್ಟು, ಆಕ್ರೋಶ ಮತ್ತು ಖಂಡನೆ ವ್ಯಕ್ತಪಡಿಸುತ್ತಿದ್ದಾರೆ. ಈ ಎಲ್ಲ ಪ್ರತಿಕ್ರಿಯೆಗಳ ಮಧ್ಯೆ ಪಾದ್ರಿಯೊಬ್ಬರು ನೀಡಿರುವ ಪ್ರತಿಕ್ರಿಯೆ ಪ್ರತ್ಯೇಕವಾಗಿ ನಿಲ್ಲುತ್ತದೆ. ಕಂದೀಲ್ ನ ಕೊಲೆ ಇತರರಿಗೊಂದು ಪಾಠ ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನದ ಪಾದ್ರಿ ಮುಫ್ತಿ ಅಬ್ದುಲ್ ಖಾವಿ ಕಂದೀಲ್ ಬಲೋಚ್ ಳೊಂದಿಗೆ […]
↧