ಇಂಗ್ಲೆಂಡ್ನಲ್ಲಿರುವ ಭಾರತ ಮೂಲದ ಇರಾ ಸಕ್ಸೇನಾ ಎಂಬ 9ರ ಬಾಲಕಿಗೆ ವಿಚಿತ್ರ ಸಮಸ್ಯೆಯೊಂದು ಎದುರಾಗಿದೆ. ಕಳೆದ ಮೂರು ವಾರಗಳಿಂದ ಆಕೆ ನಿರಂತರವಾಗಿ ದಿನಕ್ಕೆ 8000 ಬಾರಿ ಸೀನಲು ಆರಂಭಿಸಿದ್ದಾಳಂತೆ. ಪ್ರತಿ ನಿಮಿಷಕ್ಕೆ ಕನಿಷ್ಠ 10 ಬಾರಿ ಆಕೆ ಸೀನುತ್ತಾಳಂತೆ. ಈಕೆಯನ್ನು ಹಲವು ವೈದ್ಯರ ಬಳಿ ಕರೆದೊಯ್ದು ತೋರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಇರಾಳ ತಾಯಿ ಪ್ರಿಯಾ ಸಕ್ಸೇನಾ ತಿಳಿಸಿದ್ದಾರೆ. ಆಕೆಗೆ ಶೀತ ಅಥವಾ ಅಲರ್ಜಿಯ ಸಮಸ್ಯೆಯಿಲ್ಲ ಎಂದು ಆಕೆಯನ್ನು ಪರೀಕ್ಷಿಸಿದ್ದ ವೈದ್ಯರು ಹೇಳಿದ್ದಾರೆ. ಆದರೆ ಸೀನು ಮಾತ್ರ […]
↧