ಜಗತ್ತಿನ ಎಲ್ಲ ದೇಶಗಳಲ್ಲೂ ಬಹಳ ಜನಪ್ರಿಯವಾಗಿರುವ ಒಂದು ಆಯುರ್ವೇದದ ಚಿಕಿತ್ಸೆಯೆಂದರೆ ಅಭ್ಯಂಗ (ಮಸಾಜ್). ಇತ್ತೀಚಿಗೆ ಈ ಚಿಕಿತ್ಸಾ ಪದ್ಧತಿ ಹೆಚ್ಚು ಗಮನ ಸೆಳೆಯುತ್ತಿದೆ. ಗಲ್ಲಿಗಲ್ಲಿಗೊಂದು ಮಸಾಜ್ ಸೆಂಟರ್ ಹುಟ್ಟುತ್ತಿದೆ. ಹೀಗಾಗಿ, ಈ ಚಿಕಿತ್ಸೆ ಬಗ್ಗೆ ಚೆನ್ನಾಗಿ ಮಾಹಿತಿಯಿದ್ದಲ್ಲಿ ಒಳಿತು. ದೇಹದ ಮೇಲೆ ಕೈಗಳಿಂದ (ಕಾಲು, ಬೆರಳುಗಳು, ಮುಂಗೈ, ಮೊಣಕಾಲು ಅಥವಾ ಮಸಾಜರ್ ಯಂತ್ರಗಳಿಂದಲೂ ಮಸಾಜ್ ಮಾಡಬಹುದು) ನಿಯಮಿತ ಹಾಗೂ ನಿರ್ದಿಷ್ಟ ಒತ್ತಡವನ್ನು ಬಳಸಿ ಮಾಂಸಪೇಶಿಗಳನ್ನು ಹದವಾಗಿ ಉಜ್ಜುವುದೇ ಮಸಾಜ್. ಇದಕ್ಕೆ ಮೂಲತ: ಎಣ್ಣೆಯನ್ನು ಬಳಸುತ್ತಾರೆ. ಈಗೀಗ ಕ್ರೀಮ್‌ಗಳನ್ನೂ […]
↧