ಔಷಧ ಸೇವಿಸುವುದನ್ನು ಮರೆಯುವವರಿಗೆ ಇಲ್ಲಿದೆ ಒಂದು ಹೊಸ ಆ್ಯಪ್. ಮುಂಬೈ ಮೂಲದ ಹೆಲ್ತ್ ಸೇವರ್ಸ್ ಸಂಸ್ಥೆಯು ‘ಮೈಹೆಲ್ತ್‌ಸೇವರ್ಸ್’ (MyHealthSaverz) ಎಂಬ ಅಪ್ಲಿಕೇಷನ್‌ಅನ್ನು ಪರಿಚಯಿಸಿದೆ. ‘ನಿಯಮಿತ ಔಷಧ ಸೇವನೆ ಕೆಲವೊಮ್ಮೆ ಅಸಾಧ್ಯವಾಗಬಹುದು. ಹಾಗಂತ ಡೋಸ್ ತಪ್ಪಿದರೆ ಅಪಾಯಕಾರಿ. ಮರೆವು, ಆಲಸ್ಯ ಅಥವಾ ಬಿಡುವಿಲ್ಲದ ಕೆಲಸಗಳಿಂದಾಗಿ ಹೀಗಾಗಬಹುದು. ಆದರೆ ಇದರಿಂದ ಹಲವಾರು ತೊಂದರೆಗಳಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಇದು ನನ್ನ ಅನುಭವವೂ ಆಗಿತ್ತು. ಫೋನ್‌ನಲ್ಲಿ ರಿಮೈಂಡರ್ ನಂತೆ ಕೆಲಸ ಮಾಡುವ ಆ್ಯಪ್ ಮಾಡಬಾರದೇಕೆ ಎಂದು ಎನಿಸಲು ಅದೇ ಪ್ರೇರಣೆ ಆಯಿತು. […]
↧