ಟೋಕಿಯೊ: ದುಷ್ಕರ್ಮಿಯೊಬ್ಬನ ಅಟ್ಟಹಾಸಕ್ಕೆ ಜಪಾನ್ ಬೆಚ್ಚಿ ಬಿದ್ದಿದ್ದು, ವಿಕಲಾಂಗರ ಆಶ್ರಮದ ಮೇಲೆ ದಾಳಿ ಮಾಡಿದ ದುಷ್ಕರ್ಮಿ 19 ಮಾನಸಿಕ ಅಸ್ವಸ್ಥರನ್ನು ಚಾಕುವಿನಿಂದ ಇರಿದು ಕೊಂದು ಹಾಕಿರುವ ಘಟನೆ ಸೋಮವಾರ ತಡರಾತ್ರಿಯಲ್ಲಿ ನಡೆದಿದೆ. ಜಪಾನ್ ರಾಜಧಾನಿ ಟೋಕಿಯೋದಿಂದ ಆಣತಿದೂರದಲ್ಲಿರುವ ಸಗಾಮಿಹಾರ ಪ್ರದೇಶದಲ್ಲಿರುವ ವಿಕಲಾಂಗ ಮತ್ತು ಮಾನಸಿಕ ಅಸ್ವಸ್ಥರ ಆಶ್ರಮದೊಳಕ್ಕೆ ಏಕಾಏಕಿ ನುಗ್ಗಿದ ಆಗಂತುಕ ತನ್ನ ಬಳಿ ಇದ್ದ ಚಾಕುವಿನಿಂದ ಮನಬಂದಂತೆ ಸಿಕ್ಕಸಿಕ್ಕವರಿಗೆ ಚುಚ್ಚಿ ದಾರುಣವಾಗಿ ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ಸುಮಾರು 19ಮಂದಿ ಸ್ಥಳದ್ಲಲೇ ಸಾವನ್ನಪ್ಪಿದ್ದು, 20 ಅಧಿಕ ಮಂದಿ […]
↧
ಬೆಚ್ಚಿ ಬಿದ್ದ ಜಪಾನ್ ! ವಿಕಲಾಂಗರ ಆಶ್ರಮಕ್ಕೆ ನುಗ್ಗಿ19 ಮಾನಸಿಕ ಅಸ್ವಸ್ಥರನ್ನು ಚಾಕುವಿನಿಂದ ಇರಿದು ಕೊಂದ ದುಷ್ಕರ್ಮಿ
↧