ನವದೆಹಲಿ: ಕರ್ನಾಟಕ ಮೂಲದ ಸಾಮಾಜಿಕ ಕಾರ್ಯಕರ್ತ ಬೇಜವಾಡಾ ವಿಲ್ಸನ್ ಮತ್ತು ಚೆನ್ನೈ ಮೂಲದ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಟಿಎಂ ಕೃಷ್ಣ ಅವರು 2016ರ ಸಾಲಿನ ಪ್ರತಿಷ್ಠಿತ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘ಮಾನವೀಯ ಘನತೆಯ ಪರಭಾರೆ ಮಾಡಲಾಗದ ಹಕ್ಕು’ ಸ್ಥಾಪಿಸಲು ಶ್ರಮಿಸಿರುವುದಕ್ಕಾಗಿ ಬೇಜ್ವಾಡ್ ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಅದೇ ವೇಳೆ ಸಂಸ್ಕೃತಿಯಲ್ಲಿ ಸಾಮಾಜಿಕ ಒಳಗೊಳ್ಳುವಿಕೆಯನ್ನು ಖಾತರಿ ಪಡಿಸಿದ್ದಕ್ಕಾಗಿ ಸಂಗೀತ ವಿದ್ವಾಂಸ ಕೃಷ್ಣ ಅವರಿಗೆ ಈ ಪುರಸ್ಕಾರ ನೀಡಲಾಗುತ್ತಿದೆ. ಈ ಇಬ್ಬರು ಭಾರತೀಯರ ಜತೆಗೆ ಫಿಲಿಫೈನ್ಸ್ ನ […]
↧