ಬೀಜಿಂಗ್: ಸುಮಾರು 3000 ವರ್ಷಗಳಷ್ಟು ಹಳೆಯದು ಎನ್ನಲಾಗಿರುವ ಅಪರೂಪದ ಚೀನೀ ‘ಯೂ’ (ಸದಾ ಹಸಿರು) ಮರವನ್ನು ಝಿಲಿನ್ ಪ್ರಾಂತದಲ್ಲಿ ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ಭಾನುವಾರ ಇಲ್ಲಿ ಹೇಳಿದರು. ಹುವಾಂಗ್ಗೊಯು ಕಾಡಿನಲ್ಲಿ ಈ ಜೀವಂತ ಮರವನ್ನು ಪತ್ತೆ ಹಚ್ಚಲಾಗಿದೆ. 40 ಮೀಟರ್ಗಳಿಗೂ ಹೆಚ್ಚು ಎತ್ತರ ಹಾಗೂ 1.68 ಮೀಟರ್ ವ್ಯಾಸವನ್ನು ಈ ಮರ ಹೊಂದಿದೆ ಎಂದು ಅರಣ್ಯ ಆಡಳಿತದ ಮುಖ್ಯಸ್ಥ ಯಾಂಗ್ ಯೊಂಗ್ಶೆಂಗ್ ನುಡಿದರು. ಈ ವಾರದ ಆದಿಯಲ್ಲಿ ಪತ್ತೆ ಹಚ್ಚಲಾದ 30ಕ್ಕೂ ಹೆಚ್ಚು ‘ಯೂ’ ಮರಗಳಲ್ಲಿ […]
↧