ಆನ್ ಲೈನ್ ಕ್ರಾಂತಿ ಮತ್ತು ಮೊಬೈಲ್ ಇಂಟರ್ ನೆಟ್ ಸೇವೆ ಆರಂಭವಾದ ಬಳಿಕ ಈಗ ಪ್ರತಿಯೊಂದೂ ಆನ್ ಲೈನ್ ಮಯವಾಗಿದೆ. ಹಸಿವಿಗಾಗಿ ಸೇವಿಸುವ ತಿಂಡಿಯಿಂದ ಹಿಡಿದು ಮಗುವಿಗೆ ತಾಯಿ ಕುಡಿಸುವ ಹಾಲಿನವರೆಗೂ ಪ್ರತಿಯೊಂದಕ್ಕೂ ಆನ್ ಲೈನ್ ಮೊರೆ ಹೋಗುತ್ತಿದ್ದೇವೆ. ಇನ್ನು ಅನಾರೋಗ್ಯದ ವಿಚಾರಕ್ಕೆ ಬರುವುದಾದರೆ ಉತ್ತಮ ಗುಣಮಟ್ಟದ ಆಸ್ಪತ್ರೆ, ವೈದ್ಯರು, ಖರ್ಚು ವೆಚ್ಚಗಳು ಇತ್ಯಾದಿ..ಇತ್ಯಾದಿ ಸೇರಿದಂತೆ ಆಸ್ಪತ್ರೆಗೆ ದಾಖಲಾಗುವ ಮೊದಲು ಆನ್ ಲೈನ್ ಶೋಧ ನಡೆಸಿದ ಬಳಿಕವೇ ಆಸ್ಪತ್ರೆಗೆ ದಾಖಲಾಗುತ್ತಿರುವ ಉದಾಹರಣೆಗಳು ಕಣ್ಣಮುಂದೆಯೇ ಇದೆ. ಹೀಗೆ ಪ್ರತಿಯೊಂದಕ್ಕೂ […]
↧