ಎಲ್ಲಾ ಸಂಬಂಧಗಳು ನಂಬಿಕೆಯ ಆಧಾರದ ಮೇಲೆ ನಿಂತಿರುತ್ತವೆ. ಆ ನಂಬಿಕೆ ಎಂಬ ತಳಪಾಯದಲ್ಲಿ ಸ್ವಲ್ಪ ಏರುಪೇರಾದರೂ ಸಂಬಂಧಗಳ ಗೋಪುರ ಕುಸಿದು ಬೀಳುವುದು ಸತ್ಯ. ನಿಮ್ಮ ಸಂಗಾತಿ ಬಗ್ಗೆ ನಿಮ್ಮಲ್ಲಿ ಅನುಮಾನವೆಂಬ ವಾಸಿಯಾಗದ ಕಾಯಿಲೆ ಹುಟ್ಟಿಕೊಂಡಿತೆಂದರೆ ಅದನ್ನು ಹೊಡೆದೋಡಿಸುವುದು ಸಾಧ್ಯವಿಲ್ಲ. ಅದು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಹೋಗುತ್ತದೆ. ಸಂಬಂಧಗಳಲ್ಲಿ ಅನುಮಾನದ ಕರಿನೆರಳು ಕಂಡ ಕೂಡಲೇ ಅದನ್ನು ಆ ಕ್ಷಣವೇ ಸರಪಡಿಸಿಕೊಳ್ಳಬೇಕು, ಇಲ್ಲದಿದ್ದರೆ ಆ ಸಂಶಯದ ದಾರಿಯಲ್ಲಿ ನಿಮಗೆ ಗೊತ್ತಿಲ್ಲದೇ ನೀವೇ ನಡೆಯಲಾರಂಭಿಸುತ್ತೀರಿ. ಸಂಶಯವೆಂಬುದು ನಿಮ್ಮಿಂದ ಮಾಡಬಾರದ ಕೆಲಸಗಳನ್ನೆಲ್ಲ ಮಾಡಿಸಲಾರಂಭಿಸುತ್ತದೆ. […]
↧