ಕರಾಚಿ: ಪಾಕಿಸ್ತಾನದಲ್ಲಿ ಪತಿಮಹಾಶಯನೊಬ್ಬ ಕುಟುಂಬ ಮರ್ಯಾದೆಗಾಗಿ 14 ವರ್ಷಗಳ ಹಿಂದೆ ಮೊದಲ ಪತ್ನಿಯನ್ನು ಹತ್ಯೆ ಮಾಡಿದ್ದು ಇದೀಗ ಎರಡನೇ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. 35 ವರ್ಷದ ಮೂರು ಮಕ್ಕಳ ತಾಯಿ ಫರ್ಝಾನಾ ಎಂಬುವರನ್ನು ಪತಿ ರಹೀಮ್ ದಾದ್ ಕಳೆದ ರಾತ್ರಿ ಮನೆಯಲ್ಲಿ ಆಕೆಯ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಹಿರಿಯ ಅಧೀಕ್ಷಕ ಅಖ್ತರ್ ಫಾರೂಕ್ ಅವರು ತಿಳಿಸಿದ್ದಾರೆ. ಫರ್ಝಾನಾಳನ್ನು ಹೊಟ್ಟೆಗೆ ಚಾಕುವಿನಿಂದ ಚುಚ್ಚಿದ ರಹೀಮ್ ಬಳಿಕ ಆಕೆಯ ಕತ್ತು […]
↧