ಸಿಂಗಾಪುರ: ಚಾಲಕರಹಿತ ಮೊದಲ ಟ್ಯಾಕ್ಸಿ ಗುರುವಾರದಂದು ಸಿಂಗಾಪುರದಲ್ಲಿ ಪ್ರಾಯೋಗಿಕವಾಗಿ ರಸ್ತೆಗಿಳಿದಿದ್ದು, ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕರ ಪ್ರಯಾಣಕ್ಕೆ ಲಭ್ಯವಾಗಲಿದೆ. ಚಾಲಕ ರಹಿತ ಕಾರುಗಳ ಬಗ್ಗೆ ಬಹಳ ದಿನಗಳಿಂದ ಎಲ್ಲೆಡೆ ಸುದ್ದಿ ಕೇಳಿಬರುತ್ತಲೇ ಇತ್ತು. ಆದರೆ ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಸಿಂಗಾಪುರ, ವಿಶ್ವದ ಮೊದಲ ಚಾಲಕ ರಹಿತ ಅಂದರೆ ಸ್ವಯಂಚಾಲಿತ ಕಾರು ಸೇವೆ ಆರಂಭಿಸಿದೆ. ಗೂಗಲ್, ಉಬರ್ನಂಥ ಬಹುರಾಷ್ಟ್ರೀಯ ಕಂಪನಿಗಳಿಗೆ ಸೆಡ್ಡು ಹೊಡೆದಿರುವ ನುಟುನೋಮಿ ಎಂಬ ಸ್ಟಾರ್ಟಪ್ (ಹೊಸ ಕಲ್ಪನೆಯ ಉದ್ಯಮ) ಕಂಪನಿಯೊಂದು […]
↧