ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿರುವ ಜೋಕ್, ವಿಡಿಯೋ ಹಾಗೂ ತಿರುಚಿರುವ ಚಿತ್ರಗಳನ್ನು ಯಾರಿಗಾದರೂ ಕಳಿಸುವ ಮುನ್ನ ಎರಡು ಬಾರಿ ಯೋಚಿಸಬೇಕು ಇಲ್ಲದಿದ್ದರೆ ಅದರಿಂದ ಸಂಕಷ್ಟ ಎದುರಿಸಬೇಕಾಗುತ್ತದೆ ಅಷ್ಟೇ ಅಲ್ಲ ಅದು ಗಂಭೀರವಾದರೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಸ್ಮಾರ್ಟ್ ಪೋನ್‌ಗಳಲ್ಲಿ ಕಂಪ್ಯೂಟರ್‌ಗಳಲ್ಲಿ ತಮಾಷೆಗಾಗಿಯೋ ಇನ್ನೊಬ್ಬರ ಕಾಲೆಳೆಯಲು ಹೋಗಿ ಅವಹೇಳನಕಾರಿಯಾಗಿರುವ ಜೋಕ್, ವಿಡಿಯೋ ಹಾಗೂ ತಿರುಚಿರುವ ಚಿತ್ರಗಳನ್ನು ಕಳುಹಿಸಿದರೆ ಜೈಲು ಸೇರಬೇಕಾಗಬಹುದು. ಸಮಾಜದಲ್ಲಿ ದ್ವೇಷ ಹರಡುವ ಇಂತಹ ಸಂದೇಶ ಕಳಿಸಿದವರನ್ನು ಭಾರತೀಯ ದಂಡ ಸಂಹಿತೆ ಸೆಕ್ಷನ್ ೫೦೫ರ ಪ್ರಕಾರ ಬಂಧಿಸಲು ಅವಕಾಶವಿದೆ. […]
↧