ಹದಿಹರೆಯದ ವಯಸ್ಸಿನಲ್ಲಿ ಯುವಕರಲ್ಲಿ ಟೆಸ್ಟೋಸ್ಟೆರಾನ್ ಮತ್ತು ಯುವತಿಯರಲ್ಲಿ ಈಸ್ಟ್ರೋಜನ್ ಎಂಬ ಹಾರ್ಮೋನ್ ದೇಹದಲ್ಲಿ ಉತ್ಪಾದನೆಯಾಗಿ ಲೈಂಗಿಕ ಒತ್ತಡಗಳು ಉಂಟಾಗುತ್ತವೆ. ಯುವಕನಿಗೆ ಯುವತಿಯೊಬ್ಬಳನ್ನು ಕಂಡಾಗ ಲೈಂಗಿಕ ಭಾವನೆ ಉದ್ದೀಪಿಸಬಹುದು. ಯುವತಿಗೆ ಕೂಡ ಸುಂದರ ಯುವಕನೊಬ್ಬನನ್ನು ಕಂಡಾಗ ಲೈಂಗಿಕ ಅಪೇಕ್ಷೆ ಹುಟ್ಟಬಹುದು. ಆದರೆ ಆ ಭಾವನೆಗಳನ್ನು ಅದುಮಿಡಲು ಯುವಕರು,ಯುವತಿಯರು ಬಹಳ ಪ್ರಯತ್ನ ಮಾಡುತ್ತಾರೆ. ಆದರೆ ಅದುಮಿಟ್ಟರೂ, ಪ್ರವಾಹದಂತೆ ನುಗ್ಗುವ ಲೈಂಗಿಕ ಕಾಮನೆಗಳನ್ನು ನೀಗಿಸಿಕೊಳ್ಳಲು ಹದಿವಯಸ್ಸಿನಲ್ಲಿ ಅಡ್ಡದಾರಿ ಹಿಡಿಯುವ ಸಂಭವ ಹೆಚ್ಚಾಗಿರುತ್ತದೆ. ಹೀಗಾಗಿ ಅನೇಕ ಯುವಕರು ಕೆಲವು ಚಟಗಳಿಗೆ ದಾಸರಾಗುವ ಸಂಭವವಿರುತ್ತದೆ. […]
↧