ಸಾಮಾಜಿಕ ಮಾಧ್ಯಮ ಫೇಸ್ ಬುಕ್ ನಲ್ಲಿ ಬೆದರಿಕೆ, ಅನಗತ್ಯ ಸಂಪರ್ಕಗಳು, ಅಸಂಬದ್ಧ ಕಮೆಂಟ್, ಅವಹೇಳನ ಮಾಡುವುದು ಇತ್ಯಾದಿಗಳಿಂದ ಅದನ್ನು ಕೇಳಿದವರಿಗೆ ಅಥವಾ ಅಂತಹ ಅನುಭವಗಳಾದರೆ ಅಂಥವರು ಖಿನ್ನತೆಗೆ ಒಳಗಾಗುವುದು ಜಾಸ್ತಿ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ನಡೆಸುವ ಸಂವಾದವನ್ನು ಜನರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ, ಇದು ಜೀವನದ ಮೇಲೆ ಬೀರುವ ಪರಿಣಾಮ ಕಡಿಮೆ ಎಂದು ಜನರು ಭಾವಿಸುವುದೇ ಇಲ್ಲ, ಏಕೆಂದರೆ ವ್ಯಕ್ತಿಗತ ಅನುಭವಕ್ಕಿಂತ ವಾಸ್ತವ ಅನುಭವ ಇದಾಗಿರುತ್ತದೆ ಎಂದು ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದ ಸಮಂತಾ ರೊಸೆಂತಲ್ […]
↧