ಪದೇ ಪದೇ ಫೋನ್ ಬ್ಯಾಟರಿ ಸ್ಫೋಟದ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಪ್ರಸಿದ್ಧ ಕಂಪನಿ ಸ್ಯಾಮ್ಸಂಗ್ ತಯಾರಿಕೆಯ ಗ್ಯಾಲಕ್ಸಿ ನೋಟ್ 7 ಸ್ಮಾರ್ಟ್‌ಫೋನ್‌ಗಳನ್ನು ವಿಮಾನಗಳಲ್ಲಿ ಕೊಂಡೊಯ್ಯುವುದನ್ನು ವಿಮಾನಯಾನ ಕಂಪನಿಗಳು ನಿಷೇಧಿಸಿವೆ. ಜೊತೆಗೆ ಈ ಫೋನ್ ಅತ್ಯಂತ ಅಪಾಯಕಾರಿ ಎಂಬ ಹಣೆಪಟ್ಟಿ ಸಂಪಾದಿಸಿದೆ. ಈ ಹಿನ್ನೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿಗಳೇಕೆ ಸ್ಫೋಟಿಸುತ್ತವೆ? ಅದಕ್ಕೆ ಕಾರಣಗಳೇನು? ಎಂಬುದರ ಕುರಿತ ವಿವರ ಇಲ್ಲಿದೆ. ಸ್ಯಾಮ್ಸಂಗ್‌ಗೆ ಕೆಟ್ಟ ಹೆಸರು! ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ ಸ್ಯಾಮ್ಸಂಗ್ ಮುಂಚೂಣಿಯಲ್ಲಿರುವ ಹೆಸರು. ಜಗತ್ತಿನ ಅತಿ ದೊಡ್ಡ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಯೂ ಹೌದು. […]
↧