ನವದೆಹಲಿ: ಉರಿ ಉಗ್ರ ದಾಳಿ ಪ್ರಕರಣದ ಬಳಿಕ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಸಂಬಂಧ ಸಂಪೂರ್ಣ ಹಳಸಿದ್ದು, ಯಾವುದೇ ಕ್ಷಣದಲ್ಲಿ ತನ್ನ ಮೇಲೆ ಭಾರತ ಮುಗಿ ಬೀಳಬಹುದು ಎಂದೆಣಿಸಿರುವ ಪಾಕಿಸ್ತಾನ ಸೇನೆ ಭಾರಿ ತಯಾರಿಯನ್ನೇ ನಡೆಸುತ್ತಿದೆ. ಉರಿ ಉಗ್ರ ದಾಳಿ ಹಿನ್ನಲೆಯಲ್ಲಿ ಉಭಯ ದೇಶಗಳ ನಾಯಕರ ವಾಕ್ಸಮರ ಮುಂದುವರೆದಿರುವಂತೆಯೇ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿರುವ ಪಾಕಿಸ್ತಾನ ಭಾರತ ತನ್ನ ಮೇಲೆ ಮುಗಿ ಬೀಳಬಹುದು ಎಂದು ಭಾವಿಸಿ ಸೈನಿಕ ತಾಲೀಮನ್ನು ಕೂಡ ಆರಂಭಿಸಿದೆ ಎಂದು ಹೇಳಲಾಗುತ್ತಿದೆ. […]
↧