ಐದು ಸಾವಿರ ವರ್ಷಗಳ ಹಿಂದೆ ಸತ್ತಿದ್ದವರು ಮಾತನಾಡುತ್ತಾರೆ ಎಂದರೆ ನಂಬುತ್ತೀರಾ? ದೆವ್ವ ಭೂತಗಳಿರಬಹುದು ಎಂದು ಅಂದುಕೊಂಡರೆ ನಿಮ್ಮ ಅನಿಸಿಕೆ ತಪ್ಪು. ಇಟಲಿಯಲ್ಲಿ 5 ಸಾವಿರ ವರ್ಷ ಹಳೆಯದಾದ ಮಮ್ಮಿಗೆ ವಿಜ್ಞಾನಿಗಳು ಧ್ವನಿ ನೀಡಿದ್ದಾರೆ. ಐಸ್ ಮ್ಯಾನ್ ಎಂದೇ ಪ್ರಖ್ಯಾತರಾಗಿರುವ ಓಟ್ಜಿ ಮಾತನಾಡುವಂತೆ ಮಾಡಲು ಸಿಟಿ ಸ್ಕ್ಯಾನ್ ಬಳಸಿ ಶಿಲಾಯುಗದ ಅಂದಾಜಿನ ಮೇರೆಗೆ ಅತ್ಯುತ್ತಮ ಧ್ವನಿಯನ್ನು ಮರುರೂಪಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಧ್ವನಿತಂತುಗಳು, ಬಾಯಿ ಮತ್ತು ಗಂಟಲನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಮರುಸೃಷ್ಟಿ ಮಾಡಲಾಗಿದ್ದು, ಓಟ್ಜಿಯ ಧ್ವನಿ ಹೀಗೆಯೇ ಇದ್ದಿರಬಹುದೆಂದು ಊಹಿಸಲಾಗಿದೆ.
↧