ನವದೆಹಲಿ: ಭಾರತವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದಾಗಿ ಘೋಷಿಸಿರುವ ಅಲ್‌ಖೈದಾ ಕಂಪ್ಯೂಟರ್ ಹಾಗೂ ಏರೋನಾಟಿಕ್ಸ್‌ನಲ್ಲಿ ತರಬೇತಿ ಪಡೆದಿರುವ ಭಾರತೀಯ ಯುವಕರನ್ನು ತನ್ನ ಸಂಘಟನೆಗೆ ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಅದಕ್ಕಾಗಿ ನಿಷೇಧಿತ ಸಿಮಿಯ ನೆರವು ಪಡೆಯಲು ಸಂಚು ರೂಪಿಸಿದೆ. ಹೀಗೆಂದು ಬೆಂಗಳೂರು, ದೆಹಲಿ, ಕೋಲ್ಕತಾ, ಮುಂಬೈ ಸೇರಿದಂತೆ ಪ್ರಮುಖ ನಗರಗಳ ಪೊಲೀಸರಿಗೆ ಕೇಂದ್ರ ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿವೆ. ಅಲ್‌ಖೈದಾವು ಕೇವಲ ಆಕ್ರಮಣಕಾರಿ ಯುವಕರ ಮೇಲೆ ಮಾತ್ರವಲ್ಲದೆ, ಕಂಪ್ಯೂಟರ್ ಮತ್ತು ವಿಮಾನಗಳ ಬಗ್ಗೆ ತಿಳುವಳಿಕೆ ಇರುವವರ ಮೇಲೂ ಕಣ್ಣಿಟ್ಟಿದೆ. ಇದಕ್ಕಾಗಿ […]
↧