ಕರಾಚಿ: ಪಾಕಿಸ್ತಾನದಲ್ಲಿನ ಹಿಂದೂ ದೇವಾಲಯಗಳು, ಚರ್ಚ್, ಗುರುದ್ವಾರಗಳ ರಕ್ಷಣೆಗೆ ಸಿಂಧ್ ಪ್ರಾಂತ್ಯದಲ್ಲಿ 400 ದಶಲಕ್ಷ ರೂಪಾಯಿಗಳ ಯೋಜನೆಯನ್ನು ಆರಂಭಿಸಲಾಗುವುದು ಎಂದು ಮಾಧ್ಯಮ ವರದಿಗಳು ಹೇಳಿವೆ. ಸಿಂಧ್ ಪ್ರಾಂತ್ಯದಾದ್ಯಂತ ಇರುವ ಧಾರ್ಮಿಕ ಕ್ಷೇತ್ರಗಳಲ್ಲಿ ಕಣ್ಗಾವಲು ಕ್ಯಾಮರಾಗಳನ್ನು ಅಳವಡಿಸುವುದು ಮೊದಲಾದ ಮಹಾತ್ವಾಕಾಂಕ್ಷಿ ಯೋಜನೆಗಳನ್ನು ಇದು ಒಳಗೊಂಡಿದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ. ಧಾರ್ಮಿಕ ಸ್ಥಳಗಳಲ್ಲಿ ಭದ್ರತೆಯ ಕಾರಣಕ್ಕಾಗಿ ಈ ಯೋಜನೆಯನ್ನು ವಿಸ್ತಾರಗೊಳಿಸಲಾಗುತ್ತಿದೆ ಎಂದು ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿಯ ವಿಶೇಷ ಸಹಾಯಕಾಧಿಕಾರಿ ಖಟುಮಲ್ ಜೀವನ್ ಹೇಳುತ್ತಾರೆ. ಆಧುನಿಕ […]
↧