ಹ್ಯೂಸ್ಟನ್: ಇಲ್ಲಿನ ಆಸ್ಪತ್ರೆಯೊಂದರಲ್ಲಿ ಹೆಣ್ಣುಮಗುವೊಂದು ಎರಡು ಬಾರಿ ಜನಿಸಿರುವ ಅಪರೂಪದ ಘಟನೆ ನಡೆದಿದೆ. ತಾಯಿ 23 ವಾರಗಳ ಗರ್ಭಿಣಿಯಾಗಿದ್ದಾಗ ಒಮ್ಮೆ ಮಗುವನ್ನು ಹೊರತೆಗೆದಿದ್ದ ವೈದ್ಯರು, ಮಗುವಿಗೆ 20 ನಿಮಿಷಗಳ ಶಸ್ತ್ರಚಿಕಿತ್ಸೆ ನಡೆಸಿ ಮತ್ತೆ ತಾಯಿಯ ಗರ್ಭದೊಳಗಿಟ್ಟಿದ್ದರು. ಈಗ ಒಂಬತ್ತು ತಿಂಗಳು ಪೂರ್ಣಗೊಂಡ ಬಳಿಕ ತಾಯಿ ಸಹಜವಾಗಿ ಪುನಃ ಮಗುವನ್ನು ಹೆತ್ತಿದ್ದಾರೆ. ಅಮೆರಿಕದ ಮಾರ್ಗರೆಟ್‌ಬೊಮರ್‌ಅವರು 16 ವಾರದ ಗರ್ಭಿಣಿಯಾಗಿದ್ದಾಗ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ಮಗುವಿನ ಬೆನ್ನುಮೂಳೆಯ ತುದಿಯಲ್ಲಿ ಗೆಡ್ಡೆ (ಸ್ಯಾಕ್ರೊಕಾಸಿಗೆಲ್‌ಟ್ಯೂಮರ್) ಬೆಳೆಯುತ್ತಿರುವುದನ್ನು ಪತ್ತೆಮಾಡಿದ್ದರು. ‘ಇಂಥ ಗೆಡ್ಡೆಗಳು ಕ್ರಮೇಣ […]
↧