ಜಕಾರ್ತಾ: ಅವಿವಾಹಿತ ಯುವಕ- ಯುವತಿಯರು ಒಂದೇ ಬೈಕಿನಲ್ಲಿ ಪ್ರಯಾಣಿಸಿದರೆ ಯೌವ್ವನ ಸಹಜವಾದ ತಪ್ಪುಗಳು ಘಟಿಸಬಹುದೆಂಬ ಕಾರಣಕ್ಕೆ ಇಂತಹ ಯುವಕ- ಯುವತಿಯರು ಒಟ್ಟಿಗೆ ಬೈಕಿನಲ್ಲಿ ಹೋಗುವುದನ್ನು ನಿಷೇಧಿಸಲಾಗಿದೆ. ಇಂಡೋನೇಷ್ಯಾದಲ್ಲಿ ಈ ಕಾನೂನನ್ನು ಈಗ ಜಾರಿಗೆ ತರಲಾಗಿದ್ದು ಈ ಕುರಿತು ಮಾಹಿತಿ ನೀಡಿರುವ ಇಂಡೋನೇಷ್ಯಾದ ಕಾನೂನು ಪಂಡಿತ ಹಮ್ಜಾ, ಅವಿವಾಹಿತ ಯುವಕ- ಯುವತಿ ಒಟ್ಟಿಗೆ ಬೈಕಿನಲ್ಲಿ ಪ್ರಯಾಣಿಸುವುದು ಶರಿಯಾ ಕಾನೂನಿನ ಪ್ರಕಾರ ಅಪರಾಧ ಎಂದಿದ್ದಾರೆ. ಇದುವರೆಗೂ ಇಂಡೋನೇಷ್ಯಾದ ಸುಮಾತ್ರಾದಲ್ಲಿ ಮಾತ್ರ ಶರಿಯಾ ಕಾನೂನನ್ನು ಪಾಲಿಸಲಾಗುತ್ತಿದ್ದು, ಈಗ ಇದನ್ನು ಎಲ್ಲೆಡೆ ವಿಸ್ತರಿಸಲಾಗುತ್ತಿದೆ. […]
↧