ಕಜಕಸ್ತಾನ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಅಂ.ಬಾ.ನಿ)ದಲ್ಲಿ 115 ದಿನ ಪೂರೈಸಿರುವ ಮೂವರು ಗಗನಯಾತ್ರಿಗಳು ಇಂದು ಸುರಕ್ಷಿತವಾಗಿ ಕಜಕಸ್ತಾನದಲ್ಲಿ ಇಳಿದಿದ್ದಾರೆ. ಬಾಹ್ಯಾಕಾಶದಲ್ಲಿ ಮೊದಲ ಬಾರಿಗೆ ಡಿಎನ್‌ಎ ಸೀಕ್ವೆನ್ಸ್ ನಡೆಸಿದ್ದ ಅಮೆರಿಕದ ಗಗನಯಾತ್ರಿ ಕೇಟ್ ರುಬಿನ್ಸ್ ಸೇರಿದಂತೆ ರಷ್ಯಾದ ಅನಟೊಲಿ ಇವಾನಿಶಿನ್ ಮತ್ತು ಜಪಾನ್‌ನ ಟಕುಯಾ ಒನಿಷಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸುರಕ್ಷಿತವಾಗಿ ಮರಳಿದ್ದಾರೆ. ಅಣು ಜೀವಶಾಸ್ತ್ರರಾಗಿರುವ ರುಬಿನ್ಸ್ ಅಂ.ಬಾ.ನಿಯಲ್ಲಿ ಇಲಿ, ವೈರಸ್ ಮತ್ತು ಬ್ಯಾಕ್ಟೀರಿಯಾಗಳ ಡಿಎನ್‌ಎ ಮಾದರಿಯ ಸೀಕ್ವೆನ್ಸಿಂಗ್ ನಡೆಸಿದ್ದಾರೆ. ‘ಮಿನ್‌ಅಯಾನ್’ ಸಾಧನದ ಮೂಲಕ ಪ್ರಯೋಗ ನಡೆಸಲಾಗಿದ್ದು, ಇದೇ ಸಮಯದಲ್ಲಿ […]
↧