ವಾಷಿಂಗ್ಟನ್: ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರಿಗೆ ಅಮೆರಿಕದ ಅಧ್ಯಕ್ಷೆಯಾಗುವ ಸಾಮರ್ಥ್ಯವಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ. ಕಮಲಾ ಹ್ಯಾರಿಸ್ ಅಮೆರಿಕಾದ ಕ್ಯಾಲಿಫೋರ್ನಿಯಾ ಸೆನೆಟ್‌ಗೆ ಆಯ್ಕೆಯಾಗುವ ಮೂಲಕ ಏಷ್ಯಾದಿಂದ ಆಯ್ಕೆಯಾದ ಮೊದಲ ಸೆನೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾಗಿರುವ ಟ್ರಂಪ್ ಅವರು ಹೊಂದಿರುವ ವಲಸಿಗ ವಿರೋಧಿ ಧೋರಣೆಯ ವಿರುದ್ಧ ರಾಷ್ಠ್ರವ್ಯಾಪಿ ಪ್ರಚಾರಾಂದೋಲನ ನಡೆಸುವುದರ ಮೂಲಕವೂ ಕಮಲಾ ಸುದ್ದಿಯಾಗಿದ್ದಾರೆ. ‘ಈ ಆಂದೋಲನವು ಕಮಲಾ ಅವರನ್ನು ಪುನಶ್ಚೇತನಗೊಳಿಸಲಿದೆ. ಮಹಿಳೆಯರಿಗೆ ಇದುವರೆಗೂ ಸಾಧ್ಯವಾಗಿರದ ಅಮೆರಿಕ ಅಧ್ಯಕ್ಷರಾಗುವ ಕನಸನ್ನು ನನಸಾಗಿಸುವ […]
↧