ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಸಲ್ಲಿಕೆ ಮಾಡಲಾಗಿದ್ದ ಅರ್ಜಿಗೆ ಬರೊಬ್ಬರಿ 32 ಲಕ್ಷ ಮಂದಿ ಅಮೆರಿಕನ್ನರು ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಅಮೆರಿಕದ ಎಲೆಕ್ಟೋರಿಯಲ್ ಕಾಲೇಜ್ ಸಂಸ್ಥೆಗೆ ಈ ಬಗ್ಗೆ ಅರ್ಜಿ ಬಂದಿದ್ದು, ಈ ಆನ್ ಲೈನ್ ಅರ್ಜಿಗೆ 32 ಲಕ್ಷ ಮಂದಿ ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ಟ್ರಂಪ್ ಅವರ ಆಯ್ಕೆಯನ್ನು ರದ್ದುಗೊಳಿಸುವಂತೆ ಕೋರಲಾಗಿದ್ದು, ಹಿಲರಿ ಕ್ಲಿಂಟನ್ ರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂದು ಕೋರಲಾಗಿದೆ. […]
↧