ಬೀಜಿಂಗ್: ಚೀನಾದಲ್ಲಿ ನಿರ್ಮಾಣ ಹಂತದ ವಿದ್ಯುತ್ ಘಟಕ ಕುಸಿದು ಬಿದ್ದ ಕಾರಣ ಬರೊಬ್ಬರಿ 40 ಕಾರ್ಮಿಕರು ದುರಂತ ಸಾವಿಗೀಡಾಗಿದ್ದಾರೆ. ಚೀನಾದ ಜಿಯಾಂಗ್ಸಿಯಲ್ಲಿರುವ ಫೆಂಗ್‌ಶೆಂಗ್ ಪ್ರಾಂತ್ಯದಲ್ಲಿ ಈ ದುರಂತ ಸಂಭವಿಸಿದ್ದು, ವಿದ್ಯುತ್ ಘಟಕದ ಬೃಹತ್ ಟವರ್ ಕುಸಿದ ಪರಿಣಾಮ ಸುಮಾರು 40 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಅವಶೇಷಗಳಡಿಯಲ್ಲಿ ಇನ್ನೂ ಸಾಕಷ್ಟು ಮಂದಿ ಸಿಲುಕಿದ್ದು, ಅವರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಗುರುವಾರ ಮುಂಜಾನೆ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲೇ ಟವರ್ ನೆಲಕ್ಕುರುಳಿದ್ದು, ದುರಂತ ಸಂದರ್ಭದಲ್ಲಿ ನೂರಾರು ಮಂದಿ ಕಾರ್ಮಿಕರು […]
↧