ದಕ್ಷಿಣ ಕೊರಿಯಾ ಅಧ್ಯಕ್ಷರ ಕಚೇರಿ ತನ್ನ ನೌಕರರಿಗಾಗಿ 360 ವಯಾಗ್ರ ಮಾತ್ರೆಗಳನ್ನು ತರಿಸಿಕೊಂಡಿದೆ ಮತ್ತು ಈ ಕುರಿತು ಸ್ವತಃ ಕಚೇರಿಯೇ ದೃಢಪಡಿಸಿದೆ. ಆದರೆ ಈ ಮಾತ್ರೆಗಳನ್ನು ತರಿಸಿಕೊಂಡಿರುವ ಕಾರಣ ಮಾತ್ರ ವಿಚಿತ್ರವಾಗಿದೆ. ಅಧ್ಯಕ್ಷರ ಸಹಾಯಕರಿಗೆ ಎತ್ತರದ ಪ್ರದೇಶಗಳಲ್ಲಿ ಉಂಟಾ ಗುವ ಮಾನಸಿಕ ಕ್ಷೋಭೆ ನಿವಾರಿಸಲು ಈ ಮಾತ್ರೆಗಳನ್ನು ಅವರು ಬಳಸುತ್ತಾರಂತೆ. ಅಧ್ಯಕ್ಷೆ ಪಾರ್ಕ್ ಜೆಯುನ್ ಹೇಯ್ ಉಗಾಂಡ, ಇಥಿಯೋಪಿಯಾ ಮತ್ತು ಕೀನ್ಯಾ ದೇಶಗಳಿಗೆ ಪ್ರವಾಸ ಮಾಡುವರು. ಆ ದೇಶಗಳು ಸಮುದ್ರ ಮಟ್ಟಕ್ಕಿಂತ ಸುಮಾರು 1,000 ಅಡಿ ಎತ್ತರದಲ್ಲಿವೆ. […]
↧