ನವದೆಹಲಿ(ಡಿ. 07): ಆಂಡ್ರಾಯ್ಡ್ ಸ್ಮಾರ್ಟ್’ಫೋನ್ ಬಳಕೆದಾರರಿಗೆ ವಾಟ್ಸಾಪ್ ಎರಡು ಹೊಸ ಫೀಚರ್’ಗಳನ್ನು ಅಧಿಕೃತವಾಗಿ ಅಳವಡಿಸುತ್ತಿದೆ. ವಿಡಿಯೋ ಸ್ಟ್ರೀಮಿಂಗ್ ಮತ್ತು ಜಿಫ್ ಇಮೇಜ್’ಗಳನ್ನು ವಾಟ್ಸಾಪ್’ನಲ್ಲಿ ಬಳಸಬಹುದಾಗಿದೆ. ಇವೆರಡು ಫೀಚರ್’ಗಳನ್ನು ಕೆಲ ದಿನಗಳಿಂದ ಬೀಟಾ ಟೆಸ್ಟಿಂಗ್’ನಲ್ಲಿಡಲಾಗಿತ್ತು. ವಿಡಿಯೋ ಸ್ಟ್ರೀಮಿಂಗ್ ಹೇಗೆ? ಹಾಲಿ ವಾಟ್ಸಾಪ್’ನಲ್ಲಿ ವಿಡಿಯೋವನ್ನು ಪ್ಲೇ ಮಾಡಬೇಕಾದರೆ ಅದನ್ನು ಡೌನ್’ಲೋಡ್ ಮಾಡಬೇಕು. ಡೌನ್’ಲೋಡ್ ಆಗದೇ ಪ್ಲೇ ಸಾಧ್ಯವಿರಲಿಲ್ಲ. ಆದರೆ, ವಿಡಿಯೋ ಸ್ಟ್ರೀಮಿಂಗ್ ಫೀಚರ್’ನಲ್ಲಿ ಡೌನ್’ಲೋಡ್ ಇಲ್ಲದೆಯೇ ವಿಡಿಯೋವನ್ನು ಪ್ಲೇ ಮಾಡಬಹುದು. ಬಫರ್ ಆಗುತ್ತಿರುವಂತೆಯೇ ನಾವು ವಿಡಿಯೋವನ್ನು ವೀಕ್ಷಿಸಬಹುದಾಗಿದೆ. ಆದರೆ, ಈ […]
↧