ಬೇಸಿಗೆಯಲ್ಲಿ ನೀರಿನಂಶ ಹೆಚ್ಚಿರುವ ಹಣ್ಣು ತರಕಾರಿಗಳನ್ನು ಬಳಸುವುದು ಉತ್ತಮ. ಕಿತ್ತಳೆ, ಕಲ್ಲಂಗಡಿ, ಸೌತೆಕಾಯಿ ಇವೇ ಮೊದಲಾದ ಹಣ್ಣು ತರಕಾರಿಗಳು ದೇಹದಲ್ಲಿ ನೀರಿನಂಶ ಹೆಚ್ಚಿಸುತ್ತವೆ. ಕಲ್ಲಂಗಡಿ ಬೇಸಿಗೆಯ ಅವಧಿಯಲ್ಲಿ ಹೆಚ್ಚು ದೊರೆಯುವುದರಿಂದ ಹಾಗೂ ಬೆಲೆಯೂ ಕಡಿಮೆ ಇರುವುದರಿಂದ ಇದನ್ನು ಹೆಚ್ಚೆಚ್ಚು ಬಳಸುವುದು ಒಳ್ಳೆಯದು. ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಿಸುವ ಕಲ್ಲಂಗಡಿಯಲ್ಲಿ ಅನೇಕ ಔಷಧೀಯ ಗುಣಗಳು ಕೂಡ ಇವೆ. # ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿಯು (ಉರಿಮೂತ್ರ ತೊಂದರೆ) ಕಂಡುಬಂದರೆ, ಕಲ್ಲಂಗಡಿ ಹಣ್ಣಿನ ರಸವನ್ನು ಮಜ್ಜಿಗೆಯ ಜೊತೆ ಸಮನಾಗಿ ಸೇರಿಸಿ, […]
↧