ಇಸ್ಲಾಮಾಬಾದ್: 5,000 ಪಾಕಿಸ್ತಾನಿ ರೂಪಾಯಿ ನೋಟುಗಳನ್ನು ನಿಷೇಧಿಸಲು ಪಾಕಿಸ್ತಾನ ಸಂಸತ್ ನಲ್ಲಿ ನಿರ್ಣಯ ಮಂಡಿಸಲಾಗಿದೆ. ಕಪ್ಪುಹಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ. ಪಾಕಿಸ್ತಾನ ಮುಸ್ಲಿಂ ಲೀಗ್ ನ ಸಂಸದ ಉಸ್ಮಾನ್ ಸೈಫ್ ಉಲ್ಲಾ ಖಾನ್ ನಿರ್ಣಯವನ್ನು ಮಂಡಿಸಿದ್ದು, ಸಂಸತ್ ನಲ್ಲಿ ನಿರ್ಣಯಕ್ಕೆ ಬಹುತೇಕ ಸಂಸದರಿಂದ ಬೆಂಬಲ ದೊರೆತಿದೆ. 5,000 ಪಾಕಿಸ್ತಾನಿ ರೂಪಾಯಿ ಮುಖಬೆಲೆ ನೋಟುಗಳ ಚಲಾವಣೆ ಬ್ಯಾಂಕ್ ಖಾತೆಗಳ ಬಳಕೆಯನ್ನು ಕಡಿಮೆ ಮಾಡುತ್ತಿದ್ದು, ಲೆಕ್ಕಕ್ಕೆ ಸಿಗದ ಆರ್ಥಿಕತೆಯನ್ನು ಹೆಚ್ಚಿಸುತ್ತಿದೆ ಎಂಬ ಅಭಿಪ್ರಾಯ ಪಾಕಿಸ್ತಾನದ ಸಂಸತ್ […]
↧