ಇವರು ಆಸ್ಟ್ರೇಲಿಯಾದ ಪರ್ತ್‌ನಲ್ಲಿಯ ಅವಳಿ ಮಹಿಳೆಯರಾದ ಆ್ಯನಾ ಮತ್ತು ಲೂಸಿಯ. ಇವರಿಬ್ಬರೂ ಒಬ್ಬನೇ ಹುಡುಗನನ್ನು ಮದುವೆಯಾಗಲು ನಿರ್ಧರಿಸಿದ್ದಾರಂತೆ. ವಿಷಯ ಇಷ್ಟೇ ಅಲ್ಲ. ಅವರಿಬ್ಬರೂ ಆ ಹುಡು ಗನ ಜೊತೆ 5 ವರ್ಷದಿಂದ ಡೇಟಿಂಗ್ ಮಾಡುತ್ತಿದ್ದಾರೆ. ಅಲ್ಲದೇ ಅವನ ಜೊತೆ ಒಟ್ಟಿಗೇ ಮಲಗಿದ್ದಾರಂತೆ. “ನಮ್ಮಿಬ್ಬ ರನ್ನು ಮದುವೆಯಾಗುತ್ತಿರುವ ಬೆನ್ ಬೈರ್ನ್ ಅದೃಷ್ಟವಂತ’ ಎಂದು ಅವರು ಹೇಳಿದ್ದಾರೆ. ಅವರೇನೇ ಮಾಡಿದರೂ ಒಟ್ಟಿಗೇ ಮಾಡುವುದಂತೆ. ಗರ್ಭಿಣಿಯರಾಗುವುದೂ ಒಟ್ಟಿಗೇ ಅಂತೆ. ಒಂದೇ ತರಹ ಕಾಣಲು ಇವರು ಸೌಂದರ್ಯ ವರ್ಧಕ ಶಸ್ತ್ರಚಿಕಿತ್ಸೆಯನ್ನೂ ಮಾಡಿಸಿಕೊಂಡಿದ್ದಾರೆ.
↧