ಲಂಡನ್: ತನಗಿಂತಲೂ ಹೆಚ್ಚು ತೂಕ ಮತ್ತು ದೊಡ್ಡ ಗಾತ್ರದ ಆಹಾರ ಪದಾರ್ಥಗಳನ್ನು ಹೊತ್ತು ಹಿಮ್ಮುಖವಾಗಿ ಸಾಗುವ ಇರುವೆಗಳಿಗೆ ಸೂರ್ಯಪಥ ಮತ್ತು ದೃಶ್ಯ ಸ್ಮರಣೆಯೇ ಆಧಾರ. ಹೊಸ ಅಧ್ಯಯನದ ಪ್ರಕಾರ, ಇರುವೆಗಳಲ್ಲಿನ ಸಾಗುವ ಹಾದಿ ಗುರುತಿಟ್ಟುಕೊಳ್ಳುವ ಕಲೆ ಹಿಂದೆ ತಿಳಿದಿರುವುದಕ್ಕಿಂತೂ ಸೂಕ್ಷ್ಮವಾದುದಾಗಿದೆ. ವಸ್ತುಗಳನ್ನು ಎಳೆದು ಸಾಗಿಸುವಾಗ ಹಿಂದಕ್ಕೆ ಹೆಜ್ಜೆಯಿಡುವ ಇರುವೆಗಳು ಸೂರ್ಯನ ಪಥವನ್ನು ಗಮನಿಸುತ್ತವೆ. ಹಾಗೂ ಬಂದ ಹಾದಿಯ ದೃಶ್ಯ ಸ್ಮರಣೆಯನ್ನು ಬಳಸಿ ನಿರ್ದಿಷ್ಟ ಜಾಗವನ್ನು ತಲುಪುತ್ತವೆ. ಇಂಗ್ಲೆಂಡ್‌ನ ಎಡಿನ್‌ಬರ್ಗ್ ವಿಶ್ವವಿದ್ಯಾಲಯ ಸೇರಿದಂತೆ ಇತರೆ ವಿಜ್ಞಾನಿಗಳು ‘ಇರುವೆ ಚಲನೆ’ ಕುರಿತು […]
↧