ವಾಷಿಂಗ್ಟನ್,ಜ.೩೦- ಇಸಿಸ್ ಉಗ್ರರನ್ನು ರಾಷ್ಟ್ರದಿಂದ ಹೊರಗಿಡುವ ಉದ್ದೇಶದಿಂದ ಮುಸ್ಲಿಮರ ವಿರುದ್ಧ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಠಿಣ ನಿರ್ಧಾರವನ್ನು ಕೈಗೊಂಡಿರುವ ಹಿನ್ನಲೆಯಲ್ಲೇ, ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿರುವ ಪಾಕಿಸ್ತಾನ ರಾಷ್ಟ್ರವನ್ನೂ ದೂರವಿಡುವ ಸುಳಿವನ್ನು ಶ್ವೇತಭವನ ನೀಡಿದೆ. ಇಸ್ಲಾಮಿಕ್ ಉಗ್ರರನ್ನು ನಿಯಂತ್ರಿಸುವ ಉದ್ದೇಶದಿಂದ ಟ್ರಂಪ್ ಅವರು ಕೆಲ ದಿನಗಳ ಹಿಂದೆ ವಿವಾದಾತ್ಮಕ ಆದೇಶಕ್ಕೆ ಸಹಿ ಹಾಕಿದ್ದರು. ಆದೇಶದಂತೆ ಅಮೆರಿಕ ರಾಷ್ಟ್ರಕ್ಕೆ ಹೋಗಲು ಬಯಸುವ ಇರಾನ್, ಇರಾಕ್, ಸುಡಾನ್, ಲಿಬಿಯಾ, ಯೆಮೆನ್ ಮತ್ತು ಸೊಮಾಲಿಯಾ ನಾಗರಿಕರು ಹಲವು ಸುತ್ತಿನ ತಪಾಸಣೆ […]
↧