ಮಹಾನಗರಗಳಲ್ಲಿ ಟ್ರಾಫಿಕ್ಜಾಮ್ ಉಂಟಾಗಿ ಜನರು ತೊಂದರೆ ಪಡುವುದು ಸಾಮಾನ್ಯ. ಅಪಘಾತ ಮತ್ತಿತರ ಘಟನೆಗಳು ಸಂಭವಿಸಿದರೆ ರಾಷ್ಟ್ರೀಯ ಹೆದ್ದಾರಿಗಳಲ್ಲೂ ಸಂಚಾರ ದಟ್ಟಣೆ ಉಂಟಾಗುತ್ತವೆ. ಆದರೆ, ದಟ್ಟ ಕಾಡಿನ ರಸ್ತೆಯಲ್ಲಿ ಪ್ರಾಣಿಗಳೇ ಟ್ರಾಫಿಕ್ ಜಾಮ್ ಉಂಟು ಮಾಡಿದರೆ ಹೇಗಿರಬೇಡ? ದಕ್ಷಿಣ ಆಫ್ರಿಕಾದ ಕ್ರುಗರ್ ಅಂತಾರಾಷ್ಟ್ರೀಯ ಅಭಯಾರಣ್ಯದಲ್ಲಿ ಇತ್ತೀಚೆಗೆ ಭಾರಿ ಸಂಚಾರದಟ್ಟಣೆ ಉಂಟಾಗಿತ್ತು. ಇದಕ್ಕೆ ಕಾರಣವಾಗಿದ್ದು ಬರೋಬ್ಬರಿ 18 ಸಿಂಹಗಳಿದ್ದ ಗುಂಪು! ಮಧ್ಯಾಹ್ನದ ವೇಳೆಗೆ ಸಿಂಹಗಳ ಗುಂಪು ಕಾಡೆಮ್ಮೆಯೊಂದನ್ನು ಬೇಟೆಯಾಡಿತ್ತು. ರಸ್ತೆ ಮಧ್ಯೆ ಅದನ್ನು ಎಳೆತಂದು ಊಟ ಮಾಡತೊಡಗಿದವು. ಆ ರಸ್ತೆಯಲ್ಲಿ […]
↧