ಹೂಸ್ಟನ್: ಅಮೆರಿಕಾದ ಕನ್ಸಾಸ್ ನ ಒಲಾತೆ ನಗರದ ಬಾರ್ ಒಂದರಲ್ಲಿ ಭಾರತೀಯ ಮೂಲದ ಎಂಜಿನಿಯರ್ ಶ್ರೀನಿವಾಸ್ ಕುಚಿಬೊಟ್ಲಾ ಎಂಬುವವರನ್ನು ಗುಂಡಿಟ್ಟು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರುವ ಅವರ ಪತ್ನಿ ಅಮೆರಿಕಾದಲ್ಲಿ ತಮಗೆ ನೆಲೆಸಲು ಭಯವಿತ್ತು, ಆದರೆ ತಮ್ಮ ಪತಿಯೇ ನನಗೆ ಅಮೆರಿಕಾದಲ್ಲಿ ಒಳ್ಳೆಯದಾಗಬಹುದು ಎಂದು ಭರವಸೆ ನೀಡುತ್ತಿದ್ದರು ಎಂದು ಹೇಳಿದ್ದಾರೆ. ಶ್ರೀನಿವಾಸ್ ಕೆಲಸ ಮಾಡುತ್ತಿದ್ದ ಜಿಪಿಎಸ್ ಮೇಕರ್ ಜರ್ಮಿನ್ ಕಂಪೆನಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪತ್ನಿ ಸುನಾಯಾನಾ ದುಮಲಾ, ಅಮೆರಿಕಾದಲ್ಲಿರುವ ತಾರತಮ್ಯದಿಂದಾಗಿ ಅಲ್ಪಸಂಖ್ಯಾತರು ಹೆದರುವಂತಾಗಿದೆ. […]
↧