ಇಸ್ಲಾಮಾಬಾದ್: ಸೇನೆಯ ನೆರವಿನೊಂದಿಗೆ 19 ವರ್ಷಗಳ ನಂತರ ಮತ್ತೆ ರಾಷ್ಟ್ರೀಯ ಜನಗಣತಿ ಕಾರ್ಯವನ್ನು ನಡೆಸಲು ಪಾಕಿಸ್ತಾನ ಸರ್ಕಾರ ತೀರ್ಮಾನಿಸಿದೆ. ಸೇನೆಯ ಮಾಧ್ಯಮ ಪ್ರತಿನಿಧಿ ಮೇಜರ್ ಜನರಲ್ ಆಸಿಫ್ ಗಫೂರ್ ಹಾಗೂ ಮಾಹಿತಿ ಖಾತೆ ರಾಜ್ಯ ಸಚಿವೆ ಮರಿಯಮ್ ಔರಂಗ್ಜೇಬ್ ಜಂಟಿಯಾಗಿ ನಡೆಸಿದ ಪೂರ್ವಭಾವಿ ಸಭೆಯಲ್ಲಿ, ದೇಶದ ಆರನೇ ಜನಗಣತಿಯನ್ನು ಎರಡು ಹಂತಗಳಲ್ಲಿ ಕೈಗೊಳ್ಳಲು ತೀರ್ಮಾನಿಸಿದ್ದು, ಮೇ 25ರ ಒಳಗೆ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ. ‘ಈ ಕಾರ್ಯಕ್ಕಾಗಿ 2ಲಕ್ಷ ಸೈನಿಕರನ್ನು ಬಳಸಿಕೊಳ್ಳುತ್ತಿದ್ದು, ದೇಶದ ಮನೆಮನೆಗೂ ತೆರಳಿ ಜನಗಣತಿ ಕಾರ್ಯ ನಡೆಸಲಾಗುವುದು’ […]
↧