ಟೊರೊಂಟೊ: ನಿಮಗೆ ಮದ್ಯದ ಜೊತೆಗೆ ಹೆಚ್ಚು ಕೆಫೇನ್ ಅಂಶ ಇರುವ ಎನರ್ಜಿ ಪಾನೀಯಗಳನ್ನು ಬೆರೆಸಿ ಕುಡಿಯುವುದಕ್ಕೆ ಇಷ್ಟವೇ? ಮದ್ಯ ಮಾತ್ರ ಕುಡಿಯುವುದಕ್ಕಿಂತಲೂ ಇದು ಹೆಚ್ಚು ಹಾನಿಕಾರಕ ಎನ್ನುತ್ತದೆ ಅಧ್ಯಯನವೊಂದು. ಎರಡು ಪಾನೀಯಗಳನ್ನು ಬೇರೆಬೇರೆಯಾಗಿ ಬೆರಸಿ ಕುಡಿಯುವುದು ಅಥವಾ ಬಾರ್ ಗಳಲ್ಲಿ ಮೊದಲೇ ಬೆರೆಸಿಟ್ಟ ವಿಧಾನವು ಮದ್ಯಪಾನಿಯರಲ್ಲಿ ಚಾಲ್ತಿಯಲ್ಲಿದೆ. “ಮದ್ಯ ಕುಡಿದಾಗ ಉಂಟಾಗುವ ಪರಿಣಾಮವನ್ನು ಕೆಫೇನ್ ಅಂಶ ಮರೆಮಾಚುತ್ತದೆ” ಎಂದು ಕೆನಡಾದ ವಿಕ್ಟೊರಿಯಾ ವಿಶ್ವವಿದ್ಯಾಲಯದ ಅಧ್ಯಯನಕಾರ ಆದ್ರಾ ರೋಮರ್ ಹೇಳಿದ್ದಾರೆ. ಆಲ್ಕೋಹಾಲ್ ಮತ್ತು ಡ್ರಗ್ಸ್ ಅಧ್ಯಯನ ಜರ್ನಲ್ ನಲ್ಲಿ […]
↧