ವಿಶ್ವಸಂಸ್ಥೆ: 2040ರ ವೇಳೆಗೆ ಜಗತ್ತಿನ ಪ್ರತಿ ನಾಲ್ಕರಲ್ಲಿ ಒಂದು ಮಗುವಿಗೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಅಂದಾಜು 60 ಕೋಟಿ ಮಕ್ಕಳು ನೀರಿನ ಸಮಸ್ಯೆ ಅನುಭವಿಸಬೇಕಾಗುತ್ತದೆ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಮಕ್ಕಳ ತುರ್ತು ನಿಧಿ(ಯುನಿಸೆಫ್) ವರದಿ ತಿಳಿಸಿದೆ. ‘ಪ್ರಪಂಚದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿರುವಂತೆ ನೀರಿನ ಬೇಡಿಕೆ ಹಾಗೂ ಬಳಕೆಯೂ ಹೆಚ್ಚಾಗಿದ್ದು, ಸಂಪನ್ಮೂಲ ಲಭ್ಯತೆ ಕುಂಠಿತಗೊಳ್ಳುತ್ತಿದೆ. ಸದ್ಯ ಜಗತ್ತಿನ 36 ದೇಶಗಳು ನೀರಿಗಾಗಿ ಅತಿಯಾದ ಸಂಕಷ್ಟ ಸ್ಥಿತಿಯಲ್ಲಿವೆ. ಇದರೊಂದಿಗೆ ಸತತ ಬರ, ಸಮುದ್ರ ಮಟ್ಟದ ಹೆಚ್ಚಳ, ಹಿಮ ಕರಗುವಿಕೆ […]
↧