ನವದೆಹಲಿ(ಮಾ.25): ಅಧಿಕೃತವಾಗಿ ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ನೆಲಸಿರುವ 271 ಭಾರತೀಯರನ್ನು ಗಡಿಪಾರು ಮಾಡುವುದಾಗಿ ಭಾರತ ಸರ್ಕಾರಕ್ಕೆ ಅಮೆರಿಕಾ ತಿಳಿಸಿದೆ. ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಈ ಬಗ್ಗೆ ಸಂಸತ್ತಿನ ಮೇಲ್ಮನೆಯಲ್ಲಿ ಮಾಹಿತಿ ತಿಳಿಸಿದ್ದು, ಗಡಿಪಾರು ಮಾಡುವ ಮುನ್ನ ಅವರ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಅಮೆರಿಕಾ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 271 ಭಾರತೀಯರನ್ನು ಗಡಿಪಾರು ಮಾಡುವುದಾಗಿ ಅಮೆರಿಕಾ ಸರ್ಕಾರ ತಿಳಿಸಿದ್ದು, ನಾವು ಕೂಡ ಅಲ್ಲಿನ ವಿದೇಶಾಂಗ ಇಲಾಖೆಗೆ ಗಡಿಪಾರು ಆಗುವವರ ಹೆಚ್ಚಿನ ವಿವರ ನೀಡುವಂತೆ ಮನವಿ […]
↧