ವಾಷಿಂಗ್ಟನ್: ಮನೆಯಲ್ಲಿಯೇ ಅಡುಗೆ ಮಾಡಿ ತಿಂದರೆ ಮತ್ತು ಊಟ, ತಿಂಡಿ ಮಾಡುವಾಗ ಟಿವಿ, ವಿಡಿಯೋಗಳನ್ನು ವೀಕ್ಷಿಸದವರಲ್ಲಿ ಬೊಜ್ಜು ಕಾಣಿಸಿಕೊಳ್ಳುವುದು ಕಡಿಮೆ ಎನ್ನುತ್ತದೆ ಅಧ್ಯಯನವೊಂದು. ಅಮೆರಿಕಾದ ಒಹಿಯೊ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರು 12,842 ಮಂದಿ ಮೇಲೆ ಅಧ್ಯಯನ ನಡೆಸಿದ್ದರು. ಅಧ್ಯಯನಕ್ಕೊಳಪಟ್ಟವರು ತಮ್ಮ ಸಂದರ್ಶನಕ್ಕೆ ಮುನ್ನ ವಾರಕ್ಕೊಮ್ಮೆಯಾದರೂ ಕುಟುಂಬದವರ ಜೊತೆ ಸೇರಿ ಊಟ ಮಾಡುತ್ತಿದ್ದರು. ಸ್ಥೂಲಕಾಯ 30 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಲ್ಲಿ ಕಾಣುವ ಭೌತಿಕ ದ್ರವ್ಯರಾಶಿ ಸೂಚಿ(body mass index).ಇದನ್ನು ವ್ಯಕ್ತಿಯ ಎತ್ತರದ ಆಧಾರದ ಮೇಲೆ ತೂಕವನ್ನು ಅಳೆಯಲಾಗುತ್ತದೆ. […]
↧