ಬೊಸಾಸ್ಸೊ(ಸೊಮಾಲಿಯಾ): ದುಬೈಯಿಂದ ಬೊಸಾಸ್ಸೊಗೆ ತೆರಳುತ್ತಿದ್ದ ಭಾರತದ ವಾಣಿಜ್ಯ ಹಡಗನ್ನು ಕಡಲ್ಗಳ್ಳರು ಅಪಹರಿಸಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ. ಕಳೆದ ಕೆಲವು ವಾರಗಳಲ್ಲಿ ಕಡಲ್ಗಳ್ಳರು ನಡೆಸಿದ ಎರಡನೇ ದಾಳಿ ಇದಾಗಿದೆ. ಸೊಕೊಟ್ರಾ ದ್ವೀಪ ಪ್ರದೇಶದ ಬಳಿಯಿಂದ ಹಡಗು ಅಪಹರಣವಾದ ಬಗ್ಗೆ ಮಾಹಿತಿ ಲಭಿಸಿದೆ ಎಂದು ಅಡೆನ್ ಬಂದರು ವ್ಯಾಪ್ತಿಯಲ್ಲಿ ವಾಣಿಜ್ಯ ಹಡಗು ಸಾಗಾಟಕ್ಕೆ ಸಹಕಾರ ನೀಡುವ ಬ್ರಿಟನ್ ನ ಸಾಗರೋತ್ತರ ವಹಿವಾಟು ಕಾರ್ಯಾಚರಣೆ (ಯುಕೆಎಂಟಿಒ) ಸಂಸ್ಥೆ ತಿಳಿಸಿದೆ. ಹಡಗು ಎಲ್ಲಿದೆ, ಎಲ್ಲಿಗೆ ಕೊಂಡೊಯ್ಯಲಾಗಿದೆ ಎಂಬುದನ್ನು ದೃಢಪಡಿಸಲಾಗುತ್ತಿಲ್ಲ. ತನಿಖೆ ಪ್ರಗತಿಯಲ್ಲಿದೆ […]
↧